Saturday, September 25, 2010

ಕನ್ನಡ ಫಾಂಟ್ ಇಲ್ಲದಿದ್ದರೂ ಕಡತ ಓದುವುದು

ಮೈಕ್ರೋಸಾಫ್ಟ್ ವರ್ಡ್‌‌ನಲ್ಲಿ ನುಡಿ ಅಥವಾ ಬರಹ ತಂತ್ರಾಂಶದ ಮೂಲಕ ಕನ್ನಡ ಫಾಂಟ್ ಬಳಸಿ(ಉದಾ: Nudi Akshar-01) ಬರೆದ ಕಡತಗಳನ್ನು ಆ ಫಾಂಟ್ ಇಲ್ಲದ ಕಂಪ್ಯೂಟರ್‌ಗಳಲ್ಲಿ ಓದುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕನ್ನಡದಲ್ಲಿ ಬರೆದ ಕಡತಗಳನ್ನು ಬೇರೆಯವರಿಗೆ ಕಳುಹಿಸುವಾಗ, ಅವರಲ್ಲಿ ಆ ಫಾಂಟ್ ಇಲ್ಲದಿದ್ದರೂ ಅವರು ನಿಮ್ಮ ಡಾಕ್ಯುಮೆಂಟನ್ನು ಓದುವಂತೆ ಮಾಡಲು ಹೀಗೆ ಮಾಡಿ. ನೀವು ವರ್ಡ್ ಕಡತವನ್ನು ಸೇವ್ ಮಾಡುವ ಮೊದಲು tools ಗೆ ಹೋಗಿ Options ಒತ್ತಿರಿ.

ನಂತರ Save ಟ್ಯಾಬ್ ಕ್ಲಿಕ್ ಮಾಡಿ. ಅಲ್ಲಿ Save options ಕೆಳಗೆ Embed TrueType fonts ಅನ್ನು ಸೆಲೆಕ್ಟ್ ಮಾಡಿ OK ಒತ್ತಿರಿ.


ಈಗ ನಿಮ್ಮ ಕಡತಗಳನ್ನು ಸೇವ್ ಮಾಡಿ ಕಳುಹಿಸಿದರೆ ಆ ಕಡತವು ಯಾವುದೇ ಫಾಂಟಿಲ್ಲಿ ಬರೆದಿದ್ದರೂ ಕೂಡ ಬೇರೆ ಕಂಪ್ಯೂಟರ್‌‌ಗಳಲ್ಲಿ ಅದನ್ನು ಓದಬಹುದು, ಅವರಲ್ಲಿ ಆ ಫಾಂಟ್ ಇಲ್ಲದಿದ್ದರೂ ಓದುವುದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. Unicodeನಲ್ಲಿ ಇಂತಹ ಹೆಚ್ಚಿನ ತೊಂದರೆಗಳಿರುವುದಿಲ್ಲ. ಆದರೆ ANSIಯಲ್ಲಿ ಸಾಕಷ್ಟು ಫಾಂಟಿನ ರಗಳೆಗಳಿರುತ್ತವೆ. ಆದ್ದರಿಂದ Unicodeನ್ನೇ ಹೆಚ್ಚು ಬಳಸುವುದು ಸೂಕ್ತ.
ನನ್ನ ಬ್ಲಾಗ್‌‌ನಲ್ಲಿ ಈ ಲೇಖನ

1 comment:

  1. ನನ್ನ ಬರಹಗಳಿಗೆ ಕ್ರಿಯೇಟಿವ್ ಕಾಮನ್ಸ್ ಅಡಿಯಲ್ಲಿ ಕೆಲವು ಹಕ್ಕುಗಳು ಕಾದಿರಿಸಲ್ಪಟ್ಟಿದೆ. ಲೇಖನದ ಕೊನೆಯಲ್ಲಿ ನನ್ನ ಬ್ಲಾಗಿಗೆ ಲಿಂಕ್ ಕೊಡುವುದಾದರೆ ನನ್ನ ಬರಹಗಳನ್ನು ಧಾರಾಳವಾಗಿ ಬಳಸಿಕೊಳ್ಳಬಹುದು. (Not for commercial use)

    -ಪ್ರಸನ್ನ ಶಂಕರಪುರ

    ReplyDelete