
ಮಾನ್ಯರೆ ಸಂಪದದಲ್ಲಿ ಪ್ರಕಟವಾದ " ಜೈ ಎಂದ ಬಾಲಕ ಅಂಗವಿಕಲ "ಲೇಖನಕ್ಕೆ ಮೆಚ್ಚುಗೆ ಹಾಗೂ ಕಳಕಳಿ ವ್ಯಕ್ತವಾದ ಹಿನ್ನಲೆಯಲ್ಲಿ ಸಹೃದಯಿ ಸಂಪದಿಗ ಮಿತ್ರರು ಸೇರಿದಂತೆ ಹಲವರು ವಿನೋದನಿಗೆ ಆರ್ಥಿಕ ಸಹಾಯಕ್ಕೆ ಮುಂದಾಗಿದ್ದು. ಅವರುಗಳ ಹೃದಯ ವೈಶಾಲ್ಯತೆಯನ್ನು ತೋರಿದೆ. ಹಾಗೇ ಶಿಕಾರಿಪುರದ ಕರ್ನಾಟಕ ಬ್ಯಾಂಕಿನ ರವೀಶ್ ಸೇರಿದಂತೆ ಮತ್ತಿತತರು ಕೂಡ ವಿವಿಧ ರೀತಿಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ಬಂದಂತಹ ಹಣವನ್ನು ನಿಷ್ಠೆಯಿಂದ ಎಲ್ಲಾ ಗೆಳೆಯರ ಸಮ್ಮುಖದಲ್ಲಿ ಫಲಾನುಭವಿ ವಿನೋದನಿಗೆ ತಲುಪಿಸುವ ಕಾರ್ಯ ಮಾತ್ರ ನಾನು ಮಾಡಿದ್ದೇನೆ. ಹಣವನ್ನು ಆತನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು ಕೇವಲ ಶಿಕ್ಷಣಕ್ಕೆ ಮಾತ್ರ ಬಳಕೆಯಾಗುವಂತೆ ಎಚ್ಚರ ವಹಿಸಲಾಗಿದೆ. ಸಹೃದಯಿಗಳಾದ ಸಂಪದಿಗ ಮಿತ್ರರಿಗೆ, ಸಂಪದದ ಸಂಪಾದಕರಾದ ಶ್ರೀಯುತ ಹರಿಪ್ರಸಾದ್ ನಾಡಿಗರಿಗೆ ಹಾಗೇ ಸಹಾಯ ಹಸ್ತ ಚಾಚಿದ ಎಲ್ಲರಿಗೂ ಮತ್ತೊಮ್ಮೆ ಅನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ನಿಮ್ಮಗಳ ಸಹಕಾರ ಪ್ರೀತಿ ಸದಾಹೀಗೆ ಇರಲಿ.
ಸುರೇಶ್ ನಾಡಿಗ್.
9741476838
ನಿಮ್ಮ ಕೆಲಸ ಶ್ಲಾಘನೀಯ, ಹಾಗೂ ಆತನಿಗೆ ಸಹಾಯ ಮಾಡಿದ ಇತರರಿಗೂ ನನ್ನ ವಂದನೆಗಳು.
ReplyDelete-ಪ್ರಸನ್ನ.ಎಸ್.ಪಿ