Tuesday, February 21, 2012

ಶಿಕಾರಿಪುರದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ - ರೋಚಕ ಕ್ಷಣಗಳು

ಮೈತ್ರಾದೇವಿ ಸೇವಾ ಪ್ರತಿಷ್ಠಾನ, ಪೌರವಿಹಾರ ಹಾಗೂ ಕುಮದ್ವತಿ ಕ್ರೀಡಾ ಕೂಟದ ವತಿಯಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ವಿಶೇಷ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಮೂರು ದಿನಗಳ ಕಾಲ ನಡೆಯಿತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಿದರು. ಅವರ ಪುತ್ರ ಸಂಸದ ರಾಘವೇಂದ್ರ ಉಸ್ತುವಾರಿ ವಹಿಸಿದ್ದರು. ಬೆಂಗಳೂರಿನ ಸ್ಪೋರ್ಟ್ಸ್ ಹಾಸ್ಟೆಲ್ ನ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಅಪೆಕ್ಸ್ ತಮಡ ಪ್ರಥಮ ಸ್ಥಾನ ಪಡೆಯಿತು.  ರೋಚಕ ಕ್ಷಣಗಳು................

















Friday, February 10, 2012

ಚಿತ್ರಗಳು ಅರ್ಥ ಅನೇಕ


ಪುಟ್ಟಿ : ನೀನು ಯಾವಾಗಲೂ ಬಯ್ತೀಯಾ, ಹೋಗು ನಾನು ನಿನ್ನ ಜೊತೆ ಮಾತಾಡಲ್ಲಾ. ನಾನು ಏನೇ ಮಾಡಿದ್ರೂ ನೀನು ಮುದ್ದು ಮಾಡಲ್ಲಾ..............ನಂಗೆ ಅಳು ಬರ್ತಾ ಇದೆ. ಉಉಉಉಉಉಉಉಉಉಉಉಉ




ಪುಟ್ಟಿ : ಅಜ್ಜ ರವೆ ಉಂಡೆ ಹೀಗೆ ಮಾಡೋದು ಅಲ್ವಾ.
ಅಜ್ಜ : ಇಲ್ಲಾ ಪುಟ್ಟಾ, ನೀನು ಇನ್ನೂ ಸಣ್ಣವಳು ನಿಂಗೆ ಅದೆಲ್ಲಾ ಮಾಡಕ್ಕೆ ಬರಲ್ಲಾ. ನೀನು ತಿನ್ನಬೇಕು ಅಷ್ಟೆ ಪುಟ್ಟ.

Monday, January 30, 2012

ಶಿಕಾರಿಪುರಕ್ಕೆ ರೈಲು


ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ, ಅದರಲ್ಲೂ ಯಡಿಯೂರಪ್ಪನವರ ಸ್ವಕ್ಷೇತ್ರಕ್ಕೆ ಸದ್ಯದಲ್ಲೇ ರೈಲು ಸಂಪರ್ಕ ಕಲ್ಪಿಸಲಾಗುವುದು ಎಂದು ಸಂಸದ ಹಾಗೂ ಯಡಿಯೂರಪ್ಪ ಪುತ್ರ ರಾಘವೇಂದ್ರ ಭರವಸೆ ನೀಡಿದ್ದಾರೆ. ಮೊನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಈ ಮಾತನ್ನು ಆಡಿದ್ದಾರೆ. ಇದು ನಿಜಕ್ಕೂ ಹರ್ಷದಾಯಕ ಸಂಗತಿಯಾಗಿದೆ. ಶಿವಮೊಗ್ಗದಿಂದ ಶಿಕಾರಿಪುರ ಮಾರ್ಗವಾಗಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿಗೆ ಸಂಪರ್ಕ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಶಿಕಾರಿಪುರ ಜಿಲ್ಲೆಯ ಮಾದರಿಯಲ್ಲಿ ಅಭಿವೃದ್ದಿಯಾಗಿದೆ. ಎಲ್ಲಾ ಕಡೆಯಲ್ಲೂ ಸಿಮೆಂಟ್ ರಸ್ತೆ, ಹಲವಾರು ಶಾಲೆಗಳು, ವಸತಿ ನಿಲಯಗಳು ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳು ಯಡಿಯೂರಪ್ಪ ಅವಧಿಯಲ್ಲಿ ಆಗಿದ್ದು, ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.

Thursday, December 1, 2011

ಟಗರು ಕಾಳಗ

ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಟಗರು ಕಾಳಗ

Friday, September 16, 2011

ಟೊಮಾಟಿನಾ’ ಹಬ್ಬಕ್ಕೆ ಸಿ‌ಎಂ ಸದಾನಂದ ಗೌಡ ಬ್ರೇಕ್

ಬೆಂಗಳೂರು:ಇದೇ ಭಾನುವಾರ ನಡೆಯಲಿದ್ದ ‘ಟೊಮಾಟಿನಾ’ ಹಬ್ಬಕ್ಕೆ ಸಿ‌ಎಂ ಸದಾನಂದ ಗೌಡ ಬ್ರೇಕ್ ಹಾಕಿದ್ದಾರೆ.ಟೊಮಾಟಿನಾ ಹಬ್ಬ ನಡೆಯಲು ಅನುಮತಿ ನೀಡದಂತೆ ಸಿ‌ಎಂ ಬೆಂಗಳೂರು ಮತ್ತು ಮೈಸೂರು ಪೊಲೀಸರಿಗೆ ಆದೇಶ ನೀಡಿದ್ದಾರೆ.

ಟೊಮಾಟಿನಾ ಹಬ್ಬದಲ್ಲಿ ಜನರು ಪರಸ್ಪರ ಟೊಮ್ಯಾಟೋಗಳನ್ನು ಬಿಸಾಡಿ ಆಟವಾಡಿ ಮಜಾ ಮಾಡುತ್ತಾರೆ. ಈ ಆಟವನ್ನು ಖಂಡಿಸಿದ ಸಿ‌ಎಂ, ರೈತರು ಕಷ್ಟಪಟ್ಟು ಬೆಳೆಸಿದ ಈ ಬೆಳೆಯನ್ನು ಈ ರೀತಿ ಆಟವಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಸ್ಪೇನ್ ದೇಶದಲ್ಲಿ ನಡೆದು ಬರುತ್ತಿರುವ ‘ಲಾ ಟೊಮಾಟಿನಾ’ಎಂಬ ಹಬ್ಬವನ್ನೇ ಇದೀಗ ಭಾರತದಲ್ಲಿ ಟೊಮಾಟಿನಾ ಹಬ್ಬವಾಗಿ ನಡೆಸಲು ಜನರು ಮುಂದಾಗಿದ್ದಾರೆ. ಸ್ಪೇನ್‌ನಲ್ಲಿ ಆಗಸ್ಟ್ ತಿಂಗಳ ಕೊನೆ ಯ ಬುಧವಾರ ಈ ಹಬ್ಬವನ್ನು ಆಚರಿಸಲಾಗುತ್ತಿದೆ.ಈ ಹಬ್ಬಕ್ಕೆ ಸ್ಪೇನ್‌ನಲ್ಲಿ ಹಲವಾರು ಬಾರಿ ನಿಷೇಧ ಹೇರಿದರೂ,ಅದು ಈಗಲೂ ನಡೆದು ಬರುತ್ತಿದೆ.ಇತ್ತೀಚೆಗೆ ಬಿಡುಗಡೆಗೊಂಡ ಬಾಲಿವುಡ್ ಸಿನಿಮಾ ‘ಜಿಂದಗೀ ನಾ ಮಿಲೇಗಿ ದುಬಾರ’ಚಿತ್ರದಲ್ಲಿ ಈ ಹಬ್ಬದ ಚಿತ್ರೀಕರಣವಿದೆ.

ಈ ಹಬ್ಬಕ್ಕೆ ಬೆಂಗಳೂರಿನಲ್ಲಿ ಕೆಲವೊಂದು ಜನರು ಆಕ್ಷೇಪ ವ್ಯಕ್ತ ಪಡಿಸಿದ್ದು,ನಾವು ತಿನ್ನುವ ಆಹಾರ ವನ್ನು ಈ ರೀತಿ ಆಟವಾಡುವುದು ಸರಿಯಲ್ಲ ಎಂದು ವಾದಿಸಿದ್ದರೆ.

ಈ ಮೊದಲು ದೆಹಲಿಯಲ್ಲಿ ಇದೇ ಹಬ್ಬವನ್ನು ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಆಚರಿಸಲು ನಿರ್ಧರಿಸಿದಾಗ ಜನರ ವಿರೋಧದಿಂದಾಗಿ ಪ್ರಸ್ತುತ ಆಚರಣೆಯು ರದ್ದುಗೊಂಡಿತ್ತು.

http://www.gulfkannadiga.com/news-50952.html