ಬೆಂಗಳೂರು:ಇದೇ ಭಾನುವಾರ ನಡೆಯಲಿದ್ದ ‘ಟೊಮಾಟಿನಾ’ ಹಬ್ಬಕ್ಕೆ ಸಿಎಂ ಸದಾನಂದ ಗೌಡ ಬ್ರೇಕ್ ಹಾಕಿದ್ದಾರೆ.ಟೊಮಾಟಿನಾ ಹಬ್ಬ ನಡೆಯಲು ಅನುಮತಿ ನೀಡದಂತೆ ಸಿಎಂ ಬೆಂಗಳೂರು ಮತ್ತು ಮೈಸೂರು ಪೊಲೀಸರಿಗೆ ಆದೇಶ ನೀಡಿದ್ದಾರೆ.
ಟೊಮಾಟಿನಾ ಹಬ್ಬದಲ್ಲಿ ಜನರು ಪರಸ್ಪರ ಟೊಮ್ಯಾಟೋಗಳನ್ನು ಬಿಸಾಡಿ ಆಟವಾಡಿ ಮಜಾ ಮಾಡುತ್ತಾರೆ. ಈ ಆಟವನ್ನು ಖಂಡಿಸಿದ ಸಿಎಂ, ರೈತರು ಕಷ್ಟಪಟ್ಟು ಬೆಳೆಸಿದ ಈ ಬೆಳೆಯನ್ನು ಈ ರೀತಿ ಆಟವಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸ್ಪೇನ್ ದೇಶದಲ್ಲಿ ನಡೆದು ಬರುತ್ತಿರುವ ‘ಲಾ ಟೊಮಾಟಿನಾ’ಎಂಬ ಹಬ್ಬವನ್ನೇ ಇದೀಗ ಭಾರತದಲ್ಲಿ ಟೊಮಾಟಿನಾ ಹಬ್ಬವಾಗಿ ನಡೆಸಲು ಜನರು ಮುಂದಾಗಿದ್ದಾರೆ. ಸ್ಪೇನ್‌ನಲ್ಲಿ ಆಗಸ್ಟ್ ತಿಂಗಳ ಕೊನೆ ಯ ಬುಧವಾರ ಈ ಹಬ್ಬವನ್ನು ಆಚರಿಸಲಾಗುತ್ತಿದೆ.ಈ ಹಬ್ಬಕ್ಕೆ ಸ್ಪೇನ್‌ನಲ್ಲಿ ಹಲವಾರು ಬಾರಿ ನಿಷೇಧ ಹೇರಿದರೂ,ಅದು ಈಗಲೂ ನಡೆದು ಬರುತ್ತಿದೆ.ಇತ್ತೀಚೆಗೆ ಬಿಡುಗಡೆಗೊಂಡ ಬಾಲಿವುಡ್ ಸಿನಿಮಾ ‘ಜಿಂದಗೀ ನಾ ಮಿಲೇಗಿ ದುಬಾರ’ಚಿತ್ರದಲ್ಲಿ ಈ ಹಬ್ಬದ ಚಿತ್ರೀಕರಣವಿದೆ.
ಈ ಹಬ್ಬಕ್ಕೆ ಬೆಂಗಳೂರಿನಲ್ಲಿ ಕೆಲವೊಂದು ಜನರು ಆಕ್ಷೇಪ ವ್ಯಕ್ತ ಪಡಿಸಿದ್ದು,ನಾವು ತಿನ್ನುವ ಆಹಾರ ವನ್ನು ಈ ರೀತಿ ಆಟವಾಡುವುದು ಸರಿಯಲ್ಲ ಎಂದು ವಾದಿಸಿದ್ದರೆ.
ಈ ಮೊದಲು ದೆಹಲಿಯಲ್ಲಿ ಇದೇ ಹಬ್ಬವನ್ನು ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಆಚರಿಸಲು ನಿರ್ಧರಿಸಿದಾಗ ಜನರ ವಿರೋಧದಿಂದಾಗಿ ಪ್ರಸ್ತುತ ಆಚರಣೆಯು ರದ್ದುಗೊಂಡಿತ್ತು.
http://www.gulfkannadiga.com/news-50952.html